ಮೂಲದೊಡನೆ ಪರಿಶೀಲಿಸಿ

ಆಲಂಬರ್ಟನ ತತ್ತ್ವ  

ಒಂದು ಚಲನವ್ಯವಸ್ಥೆಯಲ್ಲಿ (ಮೂವಿಂಗ್ ಸಿಸ್ಟಂ) ವಿಪರ್ಯಗೊಳಿಸಿದ ಕಾರಕಬಲಗಳೂ (ರಿವಸ್ರ್ಡ್ ಇಫೆಕ್ಟಿವ್ ಫೋರ್ಸಸ್) ಬಾಹ್ಯ ಬಲಗಳೂ (ಎಕ್ಸ್‍ಟರ್ನಲ್ ಫೋರ್ಸಸ್) ಸಮಸ್ಥಿತಿಯಲ್ಲಿವೆ ಎಂಬ ನಿರೂಪಣೆ : ಆಲಂಬರ್ಟ್ ಇದನ್ನು ಮೊದಲು ಅವಿಷ್ಕರಿಸಿದುದರಿಂದ ಅವನ ಹೆಸರಿನಿಂದ ಇದು ಪ್ರಸಿದ್ಧವಾಗಿದೆ. (ಜ' ಂಟembeಡಿಣ's ಠಿಡಿiಟಿಛಿiಠಿಟe ದ ಲಾಂಬರ್ಟನ ತತ್ತ್ವ). ಚಲಿಸುತ್ತಿರುವ ಒಂದು ದೃಢವಸ್ತು ಂಯ ಮೇಲೆ ಗಣಿತೀಯ ಸಮೀಕರಣಗಳ ಪ್ರಕಾರ ಪ್ರಯುಕ್ತವಾಗುವ ಬಲಗಳು ಮೂರು ಬಗೆಯವು-ಕಾರಕಬಲಗಳು, ಬಾಹ್ಯಬಲಗಳು ಮತ್ತು ಅಂತರ್ಬಲಗಳು.  ದೃಡವಸ್ತು ಂ ಯ ಒಂದು ಕಣ Pಯ ಜಡತ್ವ m ಆಗಿರಲಿ.  ಸ್ಥಿರ ನಿರ್ದೇಶಕ ವ್ಯವಸ್ಥೆಯನ್ನು ಕುರಿತು ಇದರ ನಿರ್ದೇಶಗಳು (x,ಥಿ,z) ಎಂದಿರಲಿ.  ಆಗ , ಆ ಕಣದ ಮೇಲೆ ಪ್ರಯುಕ್ತವಾಗುವ ಮತ್ತು ಕ್ರಮವಾಗಿ x, ಥಿ, z ಅಕ್ಷಗಳಿಗೆ ಸಮಾನಾಂತರವಾಗಿರುವ ಕಾರಕಬಲಗಳು.  ಅದೇ ಕಣದ ಮೇಲಿನ ಬಾಹ್ಯಬಲಗಳ ಘಟಕಗಳು ಘಿ,ಙ.Z  ಮತ್ತು ಅಂತರ್ಬಲಗಳ ಘಟಕಗಳು ಘಿ',ಙ',Z' ಆಗಿದ್ದರೆ ಚಲನ ಶಾಸ್ತ್ರದ ನಿಯಮದ ಪ್ರಕಾರ 
				
P ಯಂಥ ಅಸಂಖ್ಯಾತ ಕಣಗಳ ಮೊತ್ತವಾದ ದೃಡವಸ್ತು ಂಯನ್ನು ಪರಿಶೀಲಿಸಿದಾಗ 
		
(ಇತ್ಯಾದಿ) ದೊರೆಯುತ್ತವೆ.  ವಸ್ತು ಧೃಡವಾಗಿರುವುದರಿಂದ ಆಯಾ ದಿಶೆಯ ಅಂತರ್ಬಲಗಳು ಮೊತ್ತವಾಗಿ ಸಮತೋಲದಲ್ಲಿವೆ.  ಆದ್ದರಿಂದ 
			
				    ಅಥವಾ
           
ಈ ಮೂರು ಸಮೀಕರಣಗಳ ವಾಕ್ಯರೂಪ ಮೇಲೆ ಬರೆದಿರುವ ಆಲಂಬರ್ಟನ ತತ್ತ್ವ.  
ಕೇವಲ ಸ್ವತಸ್ಸಿದ್ದವೆಂದು ಕಾಣುವುದಾದರೂ ಈ ತತ್ತ್ವ ಬಲು ಮಹತ್ತ್ವದ್ದು.  ದೃಢವಸ್ತುಗಳ ಇಡೀ ಚಲನಶಾಸ್ತ್ರ ಇದನ್ನು ಆಧರಿಸಿದೆ. ಇದು ವಸ್ತುವಿನ ಚಲನೆಯ ಸಮೀಕರಣಗಳನ್ನು ಸ್ಥಿತಿಶಾಸ್ತ್ರಕ್ಕೆ (ಸ್ಟ್ಯಾಟಿಕ್ಸ್) ಪರಿವರ್ತಿಸಿ, ಸಮೀಕರಣಗಳನ್ನು ಬರೆಯಲು ಅವಕಾಶ ಉಂಟುಮಾಡಿಕೊಡುತ್ತದೆ. (x, ಥಿ, z) ಬಿಂದುವಿನಲ್ಲಿ ಅಕ್ಷಗಳಿಗೆ ಸಮಾನಾಂತರವಾದ  ಬಾಹ್ಯಬಲಗಳು ಣ ಕಾಲಕ್ಕೆ ಸರಿಯಾಗಿ (x, ಥಿ, z) ಆಗಿರಲಿ.  ಆದ್ದರಿಂದ ಪ್ರತಿಬಿಂದುವಿನಲ್ಲಿಯೂ    ಬಲಗಳ ಮೊತ್ತ ನಿಶ್ಚಲತೆಯನ್ನು ಕೊಡುತ್ತದೆ.  ಆದ್ದರಿಂದ ಸ್ಥಿತಿಶಾಸ್ತ್ರದ ಸಮೀಕರಣಗಳಿಗನುಸಾರವಾಗಿ 

		ಅಥವಾ

ದತ್ತಬಲಗಳಿಗನುಸಾರವಾಗಿ ಚಲಿಸುವ ದೃಢವಸ್ತುವಿನ ಚಲನೆ ಈ ಸಮೀಕರಣಗಳಿಗನುಸಾರವಾಗಿರುತ್ತದೆ.  ಇದರ ಪರಿಣಾಮವಾಗಿ ಬಲುಮುಖ್ಯವಾದ ಈ ಕೆಳಗಿನ ಪ್ರಮೇಯಗಳನ್ನು ಸಾಧಿಸಬಹುದು. : 1. ದೃಢವಸ್ತುವಿನ ಚಲನೆಯನ್ನು ಸರಳಚಲನೆ (ಮೋಷನ್ ಆಫ್ ಟ್ರಾನ್ಸ್‍ಲೇಷನ್) ಮತ್ತು ಆವರ್ತನ ಚಲನೆ (ಮೋಷನ್ ಆಪ್ ರೊಟೇಷನ್) ಎಂದು ಇಬ್ಭಾಗಿಸಬಹುದು. ಸರಳಚಲನೆ ವಸ್ತುವಿನ ಗುರುತ್ವಕೇಂದ್ರದ (ಸೆಂಟರ್ ಆಪ್ ಗ್ರಾವಿಟಿ) ಚಲನೆ.  ವಸ್ತುವಿನ ಪೂರ್ಣ ಜಡತ್ವವನ್ನು ಕೇಂದ್ರೀಕರಿಸಿ ಗುರುತ್ವಕೇಂದ್ರದಲ್ಲಿಟ್ಟು ಬಾಹ್ಯಬಲಗಳೆಲ್ಲವೂ ಅಲ್ಲಿಯೇ ಪ್ರಯುಕ್ತವಾದರೆ ಆ ಬಿಂದುವಿಗೆ ಉಂಟಾಗುವ ಚಲನೆ ಗುರುತ್ವಕೇಂದ್ರದ ಚಲನೆ. ಇದು ವಸ್ತುವಿನ ಸರಳ ಚಲನೆಯನ್ನು ನೀಡುತ್ತದೆ. ಗುರುತ್ವಕೇಂದ್ರವನ್ನು ಸ್ಥಾಯಿಯಾಗಿಟ್ಟು ಬಾಹ್ಯಬಲಗಳು ವಸ್ತುವಿಗೆ ಅದರ ಸುತ್ತಲೂ ಉಂಟುಮಾಡುವ ಚಲನೆ ಆವರ್ತನ ಚಲನೆ. 2. ಒಂದು ರೇಖೆಯ ದಿಕ್ಕಿನಲ್ಲಿ ಬಾಹ್ಯಬಲಗಳ ಮೊತ್ತ ಶೂನ್ಯವಾದಲ್ಲಿ ಆ ದಿಕ್ಕಿನಲ್ಲಿ ವಸ್ತುವಿನ ಒಟ್ಟು ಜಡವೇಗ (ಮೊಮೆಂಟಮ್) ಸ್ಥಿರ. ಈ ಪ್ರಮೇಯವನ್ನು ರೇಖಾಜಡವೇಗದ ಸಂರಕ್ಷಣೆ (ಕನ್‍ಸರ್ವೇಷನ್ ಆಫ್ ಲೀನಿಯರ್ ಮೊಮೆಂಟಂ) ಎನ್ನುತ್ತಾರೆ. 3. ಒಂದು ರೇಖೆಯ ಸುತ್ತ ಬಾಹ್ಯ ಬಲಗಳ ಭ್ರಮಣಾಂಕಗಳ (ಮೊಮೆಂಟ್) ಮೊತ್ತ ಶೂನ್ಯವಾದರೆ, ವಸ್ತುವಿನ ಜಡವೇಗದ ಭ್ರಮಣಾಂಕ (ಮೊಮೆಂಟ್ ಆಪ್ ಮೊಮೆಂಟಂ) ಸ್ಥಿರವಾಗಿರುತ್ತದೆ.  ಈ ಪ್ರಮೇಯವನ್ನು ಕೋನೀಯ ಜಡವೇಗದ ಸಂರಕ್ಷಣೆ (ಕನ್‍ಸರ್ವೇಷನ್ ಆಫ್ ಆಂಗ್ಯುಲರ್ ಮೊಮೆಂಟಂ) ಎನ್ನುತ್ತಾರೆ.  									(ಕೆ.ಎಸ್.ಎ).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ